Monday, 24 October 2016

                                               ಇಟಗಿ ಉತ್ಸವ ಪೂರ್ವಭಾವಿ ಸಭೆ ಯಶಸ್ವಿ
 : ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಕೊಪ್ಪಳ ಮತ್ತು ಇಟಗಿ ಉತ್ಸವದ ಸಾಂಸ್ಕøತಿಕ ಸಮಿತಿಯಿಂದ 2016ರ ಡಿಸೆಂಬರ್ 25 ರಿಂದ 28ರ ವರೆಗೆ 13ನೇ ಬಾರಿಗೆ ನಡೆಯಲಿರುವ ಇಟಗಿ ಉತ್ಸವದ ಪೂರ್ವಭಾವಿ ಸಭೆಯನ್ನು      ಮಹಾದೇವ ದೇವಸ್ಥಾನದ ಆವರಣದಲ್ಲಿ ಜರುಗಿತು.
    ಇಟಗಿ ಉತ್ಸವದ ಸಂಘಟಕರಾದ ಮಹೇಶಬಾಬು ಸುರ್ವೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ನಡೆಯಲಿರುವ ಇಟಗಿ ಉತ್ಸವಕ್ಕೆ ಅಂತಾರಾಜ್ಯ ಕಲಾವಿದರನ್ನು ಆಹ್ವಾನಿಸಿ ಕಲಾಪ್ರದರ್ಶನವನ್ನು ನೀಡುವುದರ ಜೊತೆಗೆ ಇಟಗಿ ಪ್ರದೇಸ ವ್ಯಾಪ್ತಿಯ ನಾಲ್ಕೂ ದಿಕ್ಕಿನಲ್ಲೂ ಸ್ವಾಗತ ಕೋರುವ ಕಮಾನುಗಳ ನಿರ್ಮಾಣದ ಅವಶ್ಯಕತೆಯನ್ನು ಸಭೆಯಲ್ಲಿ ಮಂಡಿಸಿದರು. ಇಟಗಿ ಪ್ರವಾಸಿ ತಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಪ್ರಸ್ತಾಪಿಸಿ ಪ್ರವಾಸೋದ್ಯಮ ಇಲಾಖೆಯು ಶೀಘ್ರದಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಕೂಡಲೆ ಸ್ವಾಗತ ಕಮಾನುಗಳನ್ನು ನಿರ್ಮಿಸಲು ಒತ್ತಾಯಿಸಿದರು.
    ಸಭೆಯಲ್ಲಿ ಉತ್ಸವ ಕುರಿತು ಜನಪದ ಸಂಘಟಕ ವೈ. ಬಿ. ಜೂಡಿ, ನಾಗರಿಕರ ವೇದಿಕೆಯ ಗೌರವಾಧ್ಯಕ್ಷ ಹನುಮಂತಪ್ಪ ಕುರಿ, ಕನ್ನಡ ಸೇನೆಯ ತಾಲೂಕ ಅಧ್ಯಕ್ಷ ಅಲ್ಲಾಭಕ್ಷಿ ಕಲ್ಲೂರ, ನಿವೃತ್ತ ಗ್ರಂಥಾಲಯ ಅಧಿಕಾರಿ ಎಂ. ಸಿ. ಫಣಿ, ಶಿಕ್ಷಕ ಶ್ರೀನಿವಾಸ ಚಿತ್ರಗಾರ, ಗವಿಸಿದ್ದಪ್ಪ ಬಾರಕೇರ, ಬಸಯ್ಯ ಮಠಪತಿ, ಶಂಕ್ರಪ್ಪ ಕೋರಿ ಸೇರಿದಂತೆ ಇತರರು ಮಾತನಾಡಿ ಉಪಯುಕ್ತ ಸಲಹೆ ನೀಡಿದರು.
    ಶರಣಪ್ಪ ಹಾದಿ, ಅಲ್ತಾಫ್ ಪಟೇಲ್, ಮಹೇಶಕುಮಾರ ಹುಜರತ್ತಿ, ಮೌಲಾಹುಸೇನ್ ಎಚ್. ಕೆ, ಚಂದಾಲಿಂಗಪ್ಪ ಬಿ. ಮಾಲಗಿತ್ತಿ, ಎಚ್. ಕೆ. ಸುರ್ವೆ, ಎಂ.ಕೆ. ಕೋರಿ, ಮಲ್ಲಿಕಾರ್ಜುನ ಹುರಳಿ, ತುಳಜಪ್ಪ ನಾಯಕ ಸೇರಿದಂತೆ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಬಿ. ಎಂ. ಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಾಲಯದ ಅರ್ಚಕರಾದ ಶ್ರೀಕಾಂತ ಪೂಜಾರ ಸ್ವಾಗತಿಸಿದರು. ವೈ. ಬಿ. ಜೂಡಿ ವಂದಿಸಿದರು.

Sunday, 23 October 2016

                                 
                                                    ಇಟಗಿ ಉತ್ಸವದ ಪೂರ್ವಭಾವಿಸಭೆ
ಸಮೀಪದ ಇಟಗಿಯಲ್ಲಿ ಡಿಸೆಂಬರ್ 26,27,28 ರಂದು ಮೂರು ದಿನಗಳ ಕಾಲ ನಡೆಯುವ ಇಟಗಿ ಉತ್ಸವದ ಅಂಗವಾಗಿ ಪೂರ್ವಭಾವಿ ಸಭೆಯನ್ನು ಇಟಗಿಯ ಮಹೇಶ್ವರ ದೇವಸ್ಥಾನದಲ್ಲಿ ಇದೇ ದಿ.ಅ24 ಸೋಮವಾರ ಬೆಳಿಗ್ಗೆ 11 ಗಂಟೆಗೆ ಕರೆಯಲಾಗಿದೆ ಎಂದು ಉತ್ಸವದ ಸಂಚಾಲಕ ಮಹೇಶಬಾಬು ಸುರ್ವೇ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು. ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆ ವತಿಯಿಂದ 13ನೇ ಬಾರಿಗೆ ಆಚರಿಸಲಾಗುವ ಉತ್ಸವದ ಪೂರ್ವಭಾವಿ ಸಭೆಗೆ ಆಸಕ್ತ ಕಲಾವಿದರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಭಾಗವಹಿಸಿ ತಮ್ಮ ಸಲಹೆ ಸೂಚನೆ ನೀಡಬೇಕು ಎಂದು ಕೋರಿದ್ದಾರೆ.

Friday, 30 September 2016



ಐತಿಹಾಸಿಕ ಇಟಗಿ ಉತ್ಸವ ಕೇವಲ ಉತ್ಸವವಾಗಿರದೆ ಸಂಸ್ಕøತಿಕ ಚಳುವಳಿಯಾಗಿದೆ
ಜಿಲ್ಲಾ ನಾಗರೀಕ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರ್ವೆ ಅಭಿಮತ
ಕುಕನೂರ :
ಐತಿಹಾಸಿ,ಸುಪ್ರಸಿದ್ಧ ದೇವಾಲಯಗಳ ಚಕ್ರವರ್ತಿ ಇಟಗಿ ಗ್ರಾಮದಲ್ಲಿ ಕಳೆದ 13 ವರ್ಷಗಳಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಇಟಗಿ ಉತ್ಸವ ನೆರವೇರಿಸುತ್ತಾ ಬಂದಿದ್ದು ಇದರ ಯಶಸ್ಸು ಸಾರ್ವಜನಿಕರಿಗೆ ಸೇರುತ್ತದೆ ಎಂದು ಕೊಪ್ಪಳ ಜಿಲ್ಲಾ ನಾಗರೀಕ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರ್ವೆ ನುಡಿದರು.
ಕುಕನೂರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ಕೊಪ್ಪಳ ಜಿಲ್ಲಾ ನಾಗರೀಕ ವೇದಿಕೆಯವರು ಖಾಸಗಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಡಿ 26,27,ಮತ್ತು 28 ರಂದು ಮೂರುದಿನಗಳ ಕಾಲ ಜರುಗಲಿರುವ ಇಟಗಿ ಉತ್ಸವದ ದಶಮಾನೋತ್ಸವ ಆಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಇಟಗಿ ಉತ್ಸವ ಕೇವಲ ಉತ್ಸವವಾಗಿರದೆ ಸಂಸ್ಕøತಿಕ ಚಳುವಳಿಯಾಗಿದೆ ಎಂದರು. ಕಲಾವಿದರಿಗೆ ಪ್ರೋತ್ಸಾಹಿಸುವದು ಹಿರಿಯ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಗುರುತರವಾದÀ ಸಮಾಜಮುಖಿ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.
ಕೊಪ್ಪಳದ ಜಿಲ್ಲಾಡಳಿತದ ಮುಂಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಜಿ ಎಚ್ ಪಟೇಲರ ಮೂರ್ತಿ ಪ್ರತಿಷ್ಠಾಪಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವದು ಎಂದರು.
ಇಟಗಿ ಉತ್ಸವ ಜನರ ಉತ್ಸವವಾಗಬೇಕು,ಗ್ರಾಮೀಣ ಭಾಗದ ಕಲೆ ನಗರ ಪ್ರದೇಶಗಳಿಗೂ ವಿಸ್ತರಿಸುವ ಮಹತ್ವದ ಕೆಲಸ ಉತ್ಸವದಲ್ಲಿ ಆಗಬೇಕು ಎನ್ನುವ ಸದುದ್ದೇಶ ಈ ಉತ್ಸವ ಹೊಂದಿದೆ ಎಂದರು.
ಈ ಸಾರಿ ಇಟಗಿ ಉತ್ಸವದ ಸಂದರ್ಭದಲ್ಲಿ ಭಾನಾಪೂರ,ಬನ್ನಿಕೊಪ್ಪ,ಕುಕನೂರ ಮುಂತಾದ ಆಯಾಕಟ್ಟಿನ ಸ್ಥಳಗಳಲ್ಲಿ ಇಟಗಿ ಉತ್ಸವದ ಮಾಹಿತಿ ನೀಡುವ ಕಮಾನುಗಳನ್ನು ನಿಲ್ಲಿಸಲಾಗುವದು ಎಂದರು.
ಸಾಹಿತಿ ಜಿ ಎಸ್ ಗೋನಾಳ ಮಾತನಾಡಿ ಸುಮಾರು 5 ಸಾವಿರ ಹಿರಿ ಕಿರಿಯ ಕಲಾವಿದರಿಗೆ ವೇದಿಕೆ ಕಲ್ಪಿಸಿ 50 ಕ್ಕೂ ಹೆಚ್ಚು ಹಿರಿಯ ಕಲಾವಿದರಿಗೆ ಮಾಶಾಸನ ದೊರಕಿಸಿಕೊಡುವಲ್ಲಿ ರಾಜ್ಯ ಪತ್ರಕರ್ತರ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರ್ವೆ ಪ್ರಮುಖಪಾತ್ರ ವಹಿಸಿದ್ದಾರೆಂದು ಅವರು ಸ್ಥಳೀಯ ಪ್ರತಿಭೆಗಳಿಗೆ ಅವಕಾಸದೊರಕಿಸಿಕೊಡುವದಲ್ಲದೇ ರಾಜ್ಯದ ಪ್ರತಿಭಾವಂತ ಕಲಾವಿದರಿಗೆ ಅವಕಾಸದೊರಕಿಸಿಕೊಡುವದರ ಮೂಲಕ ರಾಜ್ಯಾದ್ಯಂತ ಉದಯೋನ್ಮುಖರ ಕಲೆಯನ್ನು ಪ್ರಚಾರಗೊಳಿಸಿದ ಕೀರ್ತಿ ಮಹೇಶಬಾಬು ಸುರ್ವೆರವರಿಗೆ ಸಲ್ಲುತ್ತದೆ ಎಂದರು.
ಪತ್ರಕರ್ತರ ಘೋಷ್ಠಿ : ಪ್ರಸಕ್ತ ಸಾಲಿನಲ್ಲಿ ನೆರವೇರುವ ಇಟಗಿ ಉತ್ಸವದಲ್ಲಿ ವಿಶೇಷವಾಗಿ ಪತ್ರಕರ್ತರ ಘೋಷ್ಠಿ ನೆರವೇರಿಸುವ ಮೂಲಕ ಪತ್ರಕರ್ತರ ತಲ್ಲಣಗಳನ್ನು ಅನಾವರಗೊಳಿಸುವದು ಮತ್ತು ಅದಕ್ಕೆ ಪರಿಹಾರವನ್ನು ಕಂಡು ಹಿಡಿಯುವ ಮಾರ್ಗ ಸೂಚಿಗಳ ಬಗ್ಗೆ ಗಂಭೀರ ಚಿಂತನೆಗಳು ನಡೆಯಬೇಕಿದೆ ಎಂದರು.
ಹಿರಿಯ ಪತ್ರಕರ್ತ ಅಲ್ಲಾವುದ್ದೀನ ಯಮ್ಮಿ ಮಾತನಾಡಿ ಖಾಸಗಿ ಸಹಭಾಗಿತ್ವದಲ್ಲಿ ಐತಿಹಾಸಿಕ ಇಟಗಿ ಉತ್ಸವ ಆಚರಿಸಬೇಕು. ಆದರೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಇಟಗಿ ಉತ್ಸವದ ಹೊಣೆಗಾರಿಕೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮಹೇಶಬಾಬು ಸುರ್ವೆಕಳೆದ 13 ವರ್ಷಗಳಿಂದಲೂ ಜವಾಬ್ದಾರಿಯಿಂದ ನಿರ್ವಹಿಸುತಿದ್ದಾರೆ.ಸುರ್ವೆ ಅವರ ಜನಪರ ಕಾಳಜಿ ನಿಜಕ್ಕೂ ಶ್ಲಾಘನೀಯವಾಗಿದೆ.
ಗ್ರಾಮೀಣ ಭಾಗದ ಪ್ರತಿಭೆಗಳನ್ನು ನಾಡಿಗೇ ಪರಿಚಯಿಸುವ ಕೆಲಸ ಇತರರಿಗೂ ಮಾದರಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಮಲ್ಲಪ್ಪ ಮಾಟರಂಗಿ,ಪಂಚಯ್ಯ ಹಿರೇಮಠ, ನಾಗರಾಜ ಬೆಣಕಲ್, ಮಂಜುನಾಥ ಅಂಗಡಿ,ಬಸವರಾಜ ಕೊನಾರಿ ಮುಂತಾದವರು ಉಪಸ್ಥಿತರಿದ್ದರು.

Thursday, 18 August 2016

10ನೇ ಕೊಪ್ಪಳ ಜಿಲ್ಲಾ ಉತ್ಸವ
ಕೊಪ್ಪಳ ಜಿಲ್ಲೆಯಾಗಿ ದಶಮಾನೋತ್ಸವದ ಸಂಭ್ರಮದಲ್ಲಿ ಪ್ರಾರಂಭಿಸಲಾದ ಕೊಪ್ಪಳ ಜಿಲ್ಲಾ ಉತ್ಸವವು ಕಳೆದ 9ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಇದೀಗ 10ನೇ ವರ್ಷಕ್ಕೆ ಪಾದರ್ಪಣೆಯನ್ನು ಮಾಡುತ್ತಿದ್ದೆ, ಜಿಲ್ಲೆಯ ಸ್ಥಳೀಯ ಸಂಪನ್ಮೂಲಗಳನ್ನು ಬಳಿಸಿಕೊಂಡು ಸಾರ್ವಜನಿಕರ ಸಹಾಯ ಸಹಕಾರದಿಂದ ಉತ್ತಮ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಜನ ಮನಗಳಲ್ಲಿ ಕೊಪ್ಪಳ ಜಿಲ್ಲಾ ಉತ್ಸವವು ಒಂದು ಸಾಂಸ್ಕøತಿಕ ಪ್ರತೀಕವಾಗಿದ್ದು. ಕೊಪ್ಪಳ ಜಿಲ್ಲಾ ನಾಗರೀಕ ವೇದಿಕೆ ವತಿಯಿಂದ ಕಳೆದ 2007 ರಿಂದಲೂ ಕೊಪ್ಪಳ ಜಿಲ್ಲಾ ಉತ್ಸವವನ್ನು ಆಚರಿಸುತ್ತಾ ಬಂದಿದ್ದು,
ಕೊಪ್ಪಳ ಜಿಲ್ಲೆಯು ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಒಂದಾಗಿದ್ದು, ಕೊಪ್ಪಳ ಜಿಲ್ಲಾ ಉತ್ಸವವು ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಿ ಕೊಡುವ ಮೂಲಕ ಜಿಲ್ಲೆಯ ಜನ ಮನಗಳಲ್ಲಿ ಬೇರೂರಿದೆ. ಅಂತಹ ಕಾರ್ಯಕ್ರಮಗಳಲ್ಲಿ ……
1) ಗ್ರಾಮಿಣ ಪ್ರತಿಭೆಗಳಿಗೆ ಉತ್ತೇಜನ :
ಜಿಲ್ಲೆಯ ಎಲೆಮರೆಯ ಕಾಯಿಯಂತೆ ಇರುವಂತಹ ಗ್ರಾಮಿಣ ಭಾಗದ ಪ್ರತಿಭೆಗಳನ್ನು ಗುರುತಿಸಲು ಸೂಕ್ತವಾದ ವೇದಿಕೆನ್ನು ನಿರ್ಮಿಸಿಕೊಡುವ ಮೂಲಕ ಜಾಗೃತಿಯನ್ನು ಬಿಂಬಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಹಾಗೂ ಪ್ರತಿಭೆಗಳಿಗೆ ಬಹುಮಾನವನ್ನು ನೀಡುತ್ತಾ ಅವರ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ.
2) ವೈವಿಧ್ಯಮಯ ಸಾಂಸ್ಕ್ರತಿಕ ಕಲಾ ತಂಡಗಳ ಪ್ರದರ್ಶನ:
ಜಿಲ್ಲೆಯ ಶ್ರೇಷ್ಠ ಕಲಾ ತಂಡಗಳನ್ನು ಆಹ್ವಾನಿಸಿ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ 3 ದಿನಗಳ ಕಾಲ ಸಾಂಸ್ಕøತಿಕ ಸವಿಯೂಟವನ್ನು ಉಣಬಡಿಸುತ್ತಾ ಬಂದಿದು, ವೈವಿಧ್ಯಮಯ ಕಲಾ ತಂಡಗಳ ಪ್ರದರ್ಶನ ಜೊತೆ ಜೊತೆಗೆ ಜಾನಪದ, ಜೋಗುತಿ ಕುಣಿತ, ನೃತ್ಯ ರೂಪಕ, ರೈತ ಗೀತೆ ಪಾಶ್ಚಿಮಾತ್ಯ ನೃತ್ಯ, ಮೊದಲಾದ ಕಲಾ ಪ್ರಕಾರಗಳಿಂದ ವರ್ಣ ರಂಜಿತಾದ ಕಲಾ ಪ್ರದರ್ಶನವನ್ನು ನೀಡಿದ್ದು ಇತಿಹಾಸ.
3) ಜಿಲ್ಲೆಯ ಸಮಸ್ಯೆಗಳ ಕುರಿತಾದ ಚರ್ಚೆ :
ಹಿಂದುಳಿದ ಪ್ರದೇಶವಾಗಿರುವ ಜಿಲ್ಲೆಯು ಈ ಉತ್ಸವದ ವೇದಿಕೆಯ ಮೂಲಕ ಜಿಲ್ಲೆಯ ಸಮಸ್ಯೆಗಳನ್ನು ಚರ್ಚಿಸುತ್ತಾ ಹಾಗೂ ಜಿಲ್ಲೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಸಾರ್ವಜನಿಕರು ಹಾಗೂ ಜನ ಪ್ರತಿನಿಧಿಗಳ ನಡುವಿನ ಚರ್ಚೆಗೆ ವೇದಿಕೆಯನ್ನು ಮಾಡಿಕೊಟ್ಟಿದೆ.
4) ಪ್ರತಿಭಾ ಪುರಸ್ಕಾರ :
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರಿಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದಂತಹ ಪ್ರತಿಭಾವಂತ ವಿಧ್ಯಾರ್ಥಿಗಳನ್ನ ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರವನ್ನು ಮಾಡುವ ಮೂಲಕ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ.
5) ಗೌರವ ಸನ್ಮಾನ ಹಾಗೂ ಗ್ರಂಥ ಬಿಡುಗಡೆ :
ಜಿಲ್ಲೆಯಲ್ಲಿ ಜನ ಸಾಮಾನ್ಯರಿಗೆ ನೇರವಾಗುವಂತಹ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಿದಂತಹ ಜನ ಪ್ರತಿನಿಧಿಗಳಿಗೆ ಹಾಗೂ ಜಿಲ್ಲೆಯ ಹೆಸರನ್ನು ಉನ್ನತವಾದ ತರದಲ್ಲಿ ಕೊಂಡೊಯ್ಯುವಲ್ಲಿ ಪ್ರಮುಖರಾದ ಪತ್ರಕರ್ತರಿಗೆ, ಸಾಹಿತಿಗಳಿಗೆ, ಕಲಾತಂಡಗಳಿಗೆ ಹಾಗೂ ಕ್ರೀಡಾ ಪಟುಗಳಿಗೆ, ಗೌರವ ಸನ್ಮಾನ ಮಾಡುವ ಮೂಲಕ ಪ್ರೋತ್ಸಾಹ ಮಾಡುತ್ತಾ ಬಂದಿದೆ, ಹಾಗೂ ಹೊಸ ಗ್ರಂಥ ವಿಮರ್ಶಕರಿಗೆ ಗ್ರಂಥ ಬಿಡುಗಡೆಗೆ ಇದೊಂದು ವೇದಿಕೆಯನ್ನು ಕಲ್ಪಿಸಿ ಕೊಟ್ಟಿದೆ.
6) ತಿರುಳ್‍ಗನ್ನಡ ಸಾಹಿತ್ಯ ಸಮ್ಮೇಳನ :
ಈಗಾಗಲೇ7 ತಿರುಳ್‍ಗನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿ ಈ ಭಾಗದ ಹಿರಿಯ ಸಾಹಿತಿಗಳನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿ ಆ ಮೂಲಕ ಅವರಿಗೆ ಗೌರವ ನೀಡಿ ಆ ಮೂಲಕ ಅವರಿಗೆ ಗೌರವಾರ್ಪಣೆ ಮಾಡಿದೆ, ಈ ಸಮ್ಮೇಳನದ ಮೂಲಕ ಜಿಲ್ಲೆಯ ಲೇಖಕರ ಪುಸ್ತಕಗಳ ಪ್ರದರ್ಶನ, ಕವಿಗೋಷ್ಠಿ, ಸವಾಂದದಂತಹ ಕಾರ್ಯಕ್ರಮಗಳ ಮೂಲಕ ಯುವ ಲೇಖಕರನ್ನು ಪ್ರೋತ್ಸಾಹಿಸಿದೆ.
7) ಜಿಲ್ಲಾ ಉತ್ಸವದ ಕವಿಗೋಷ್ಠಗಳು :
ಕಳೆದ 9ಜಿಲ್ಲಾ ಉತ್ಸವಗಳಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಉದಯೋನ್ಮೂಕ ಯುವ ಪ್ರತಿಭಾವಂತ ಯುವ ಕವಿಗಳಿಗೆ ಜಿಲ್ಲಾ ಉತ್ಸವದ ತಿರುಳುಗನ್ನಡ ಕವಿ ಗೋಷ್ಠಯನ್ನು ಸಿದ್ದಯ್ಯ ಪುರಾಣಿಕ್‍ರವರ ಸ್ಮರಣಾರ್ಥ ನಡೆಸುತ್ತಾ ಬಂದಿದೆ, ಈಗಾಗಲೇ ನಡೆದಂತಹ ಕವಿಗೋಷ್ಠಗಳಲ್ಲಿ ಸುಮಾರು 1500 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಿದ್ದು ಇತಿಹಾಸ.
8) ಸಿದ್ದಯ್ಯ ಪುರಾಣಿಕ್ ಪ್ರತಿಮೆ ಅನಾವರಣ :
ಜಿಲ್ಲೆಯ ನಗರದಲ್ಲಿ 2010 ರಂದು ಕಾವ್ಯನಂದ ಪಾರ್ಕನಲ್ಲಿ ಸಿದ್ದಯ್ಯ ಪುರಾಣಿಕ್ ರವರ ಪ್ರತಿಮೆಯನ್ನು ನಾಗರೀಕ ವೇದಿಕೆ ವತಿಯಿಂದ ಅನಾವರಣಗೊಳಿಸಲಾಗಿದೆ ಜಿಲ್ಲೆಯಲ್ಲಿ ಇದೇ ಪ್ರಪ್ರಥಮವಾಗಿ ಕವಿಗಳ ಪ್ರತಿಮೆ ಅನಾವರಣಗೊಂಡಿದ್ದು, ಮುಂಬರಲಿರುವ ದಿನಗಳಲ್ಲಿ ಕೊಪ್ಪಳ ಜಿಲ್ಲೆಯ ಹರಿಕಾರರಾದಂತಹ ಜೆ.ಹೆಚ್ ಪಾಟೇಲ್ ರವರ ಪ್ರತಿಮೆಯನ್ನು ಅನಾವರಣ ಮಾಡುವ ಯೋಜನೆಯು ನಾಗರೀಕ ವೇದಿಕೆಯದ್ದಾಗಿದೆ, ಅತೀ ಶಿಘ್ರದಲ್ಲಿಯೇ ಈ ಯೋಜನೆಯೂ ಸಾಕರಗೊಳ್ಳಲಿದೆ ಎಂದು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿದ್ದು ಒಳ್ಳೆಯ ಬೆಳವಣಿಗೆ.
9) 371 ಕಾಲಂ ಚರ್ಚೆ
ಕಳೆದ 8 ಉತ್ಸವಗಳಲ್ಲಿ ಹೈದ್ರಾಬಾದ್ ಕರ್ನಾಟಕ ಹೋರಾಟಗಾರರನ್ನು ಕರೆಯಿಸಿ ಅವರನ್ನು ಗೌರವಿಸಿ ಅವರಿಂದ ಉಪನ್ಯಾಸವನ್ನು ಏರ್ಪಡಿಸಿ. 371 ಕಾಲಂ ಹೋರಾಟದಲ್ಲಿ ಸಾಹಿತ್ಯ ಹಾಗೂ ಸಾಂಸ್ಕ್ರತೀಕವಾಗಿ ಹೋರಾಟವನ್ನು ಬೆಂಬಲಿಸಿ 371 ಕಾಲಂ ಆಗುವಲ್ಲಿ ಕೊಪ್ಪಳ ಜಿಲ್ಲಾ ನಾಗರೀಕ ಸಾಂಸ್ಕ್ರತೀಕ ವೇದಿಕೆ ಮಹತ್ವದ ಪಾತ್ರ ವಹಿಸಿದೆ.
ಮುಂಬರಲಿರುವ ದಿನಗಳಲ್ಲಿ 371 ಕಾಲಂ ಸಮರ್ಪಕ ಆಗಗದಿರುವದನ್ನು ಖಂಡಿಸಿ ಇಂತಹ ಉತ್ಸವಗಳ ಮೂಲಕ ಪ್ರತಿಭಟಿಸಲಾಗುವುದು. ಈ ಬಾರಿಯ ತಿರುಳುಗ್ಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೈದ್ರಾಬಾದ್ ಕರ್ನಾಟಕ 371 ಕಾಲಂ ಜಾರಿ ನಂತರದ ಸ್ಥಿತಿ-ಗತಿಗಳ ಕುರಿತಾದ ಸಂವಾದ ಏರ್ಪಡಿಸಲಿದೆ.
10) ಸಿದ್ದಯ್ಯ ಪುರಾಣಿಕ್ ಪ್ರಶಸ್ತಿ ಪ್ರಧಾನ
ಕಳೆದ 8 ಜಿಲ್ಲಾ ವತ್ಸವಗಳಲ್ಲಿ ಸಿದ್ದಯ್ಯ ಪುರಾಣಿಕ್ ಅವರ ಹೆಸರಿನಲ್ಲಿ ರಾಜ್ಯದ ಪ್ರತಿಭಾನ್ವಿತ ಮತ್ತು ಉದಯೊನ್ಮಕ ಗೌರವಾನ್ವಿತರನ್ನು ಆಹ್ವಾನಿಸಿ ಅವರಿ ಅವರು ಸಲ್ಲಿಸಿದ ಸೇವೆಗಾಗಿ ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ಸಿದ್ದಯ್ಯ ಪುರಾಣಿಕ್ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈಗಾಗಲೇ ಸುಮಾರು 300 ಕ್ಕೂ ಹೆಚ್ಚು ಪ್ರತಿಭಾವಂತರಿಗೆ ಈ ಗೌರವ ಲಭಿಸಿದೆ.
ಸರಕಾರದ ಅನುದಾನ ಇದ್ದರೂ ಜಿಲ್ಲೆಯಲ್ಲಿ ಆನೆಗುಂದಿ ಉತ್ಸವ ಮತ್ತು ಕನಕಗಿರಿ ಉತ್ಸವವನ್ನು ಕಡ್ಡಾಯ ಮತ್ತು ನಿರಂತರವಾಗಿ ಮಾಡಿದ ಉದಾಹರಣೆಗಳಿಲ್ಲಾ. ಅದಾಗಿಯ್ಯೊ ಸಾರ್ವಜನಿಕರ ಸಹಕಾರದೊಂದಿಗೆ ನಾಗರೀಕ ವೇದಿಕೆ ವತಿಯಿಂದ ಕಳೆದ 2007 ರಿಂದಲೂ ನಿರಂತರವಾಗಿ ಅಗಷ್ಟ 24 ರಂದು ನಡೆಸುತ್ತಾ ಬಂದಿದೆ.
ಪ್ರತಿ ವರ್ಷದಂತೆ ಈ ವರ್ಷಯೂ ಕೂಡ ಜಿಲ್ಲೆಯ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ಉತ್ಸವವು ಇದೇ2016 ಅಗಸ್ಟ್ ತಿಂಗಳ ದಿನಾಂಕ 24.25,26.27ಹಾಗೂ 28 ರಂದು ಜರುಗಲಿದ್ದು, ಕಾರ್ಯಕ್ರಮಕ್ಕೆ ಬೇಕಾದಂತಹ ಸಕಲ ಸಿದ್ದತೆಗಳೂ ಭರದಿಂದ ಸಾಗಿವೆ ಕೊಪ್ಪಳ ಜಿಲ್ಲೆಯ ಜನರಿಗಾಗಿ ಜನರಿಗೋಸ್ಕರ ನಡೆಯುವ ಕೊಪ್ಪಳ ಜಿಲ್ಲಾ ಉತ್ಸವವು ಕಳೆದ ಉತ್ಸವಗಳಿಗಿಂತ ಈ ಬಾರಿಯ ಕಾರ್ಯಕ್ರಮಗಳಲ್ಲಿ ಇನ್ನೂ ಅಧಿಕ ಜನ ಸಾಮಾನ್ಯರ ಬರುವಿಕೆಯ ನಿರೀಕ್ಷೆಯನ್ನು ಹೊಂದಿದೆ.

Wednesday, 3 February 2016

ಸಚಿವೆ ಉಮಾಶ್ರೀ ಭಾವಚಿತ್ರಕ್ಕೆ ಕ್ಯಾಕರಿಸಿ ಉಗಿಯುವ ಮೂಲಕ ಪ್ರತಿಭಟನೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾರ್ಗಸೂಚಿಯನ್ವಯ ಹೈದರಾಬಾದ ಕರ್ನಾಟಕ ಪ್ರದೇಶಕ್ಕೆ ಅನ್ಯಾಯ ಮಾಡುತ್ತಿದ್ದು, ಸಚಿವೆ ಉಮಾಶ್ರೀ ಅವರ ನಿರ್ಲಕ್ಷ ಹಾಗೂ ಇಲಾಖೆಯ ನಿರ್ದೇಶಕರ ಸರ್ವಾಧಿಕಾರಿ ಧೋರಣೆ, ಖಂಡಿಸಿ ಇಂದು ಕೊಪ್ಪಳದ ಅಶೋಕ ವೃತ್ತದಲ್ಲಿ ಬೆ. ೧೧ ಗಂಟೆಗೆ ಹೈದರಾಬಾದ ಕರ್ನಾಟಕ ಸಾಹಿತಿ, ಕಲಾವಿದರ ಕನ್ನಡಪರ ಸಂಘಟನೆಗಳ ಸಾಂಸ್ಕೃತಿಕ ಒಕ್ಕೂಟದ ಅಡಿಯಲ್ಲಿ ಸಾಂಸ್ಕೃತಿಕ ಪ್ರತಿಭಟನೆಯನ್ನು ವಿನೂತನ ಶೈಲಿಯಲ್ಲಿ ಹಮ್ಮಿಳ್ಳಲಾಯಿತು.
ಈ ಪ್ರತಿಭಟನೆಯಲ್ಲಿ ಸಚಿವೆ ಉಮಾಶ್ರೀ ಅವರ ನಿರ್ಲಕ್ಷ ಧೋರಣೆಯನ್ನು ಖಂಡಿಸಿ ಅವರ ಭಾವಚಿತ್ರಕ್ಕೆ ಕ್ಯಾಕರಿಸಿ ಉಗಿಯುವ ಮೂಲಕ ವಿಶೇಷವಾಗಿ ಪ್ರತಿಭಟನೆ ಮಾಡಲಾಯಿತು.
ಹೈದರಾಬಾದ ಕರ್ನಾಟಕ ಪ್ರದೇಶದ ಕಲಾವಿದರ ನಿರ್ಲಕ್ಷ, ಸಂಘ ಸಂಸ್ಥೆಗಳಿಗೆ ಅನುದಾನ ನೀಡುವಲ್ಲಿ ಅನುಸರಿಸುತ್ತಿರುವ ತಾರತಮ್ಯ ನೀತಿ, ಲಭ್ಯ ಅನುದಾನದಲ್ಲಿ ಪ್ರಾಧೇಶಿಕ ಆದ್ಯತೆಯ ನಿರ್ಲಕ್ಷ, ಆನ್‌ಲೈನ್‌ನಲ್ಲಿ ಸಂಘ ಸಂಸ್ಥೆಗಳಿಗೆ ಧನಸಹಾಯ ನೀಡುವಲ್ಲಿ ಕಠಣ ನಿಯಮಗಳನ್ನು ಕಡ್ಡಾಯಗೊಳಿಸಿ ತಮಗೆ ಬೇಕಾದ ಬೆಂಗಳೂರಿನ ಸಂಸ್ಥೆಗಳಿಗೆ ನಿಯಮಗಳನ್ನು ಸಡಿಲಿಸಿ ಭರಪೂರ ಧನಸಹಾಯವನ್ನು ಅವರಿಗೆ ನೀಡಿ ಹೈದರಾಬಾದ ಕರ್ನಾಟಕ ಪ್ರದೇಶದ ಸಂಘ ಸಂಸ್ಥೆಗಳಿಗೆ ಅನ್ಯಾಯ ಮಾಡಿದ್ದಾರೆ. ಆಗಸ್ಟ್ ೨೦೧೫ರಲ್ಲಿ ಆನ್‌ಲೈನ್‌ಲ್ಲಿ ಅರ್ಜಿ ಕರೆದು ಇಲ್ಲಿಯ ವರೆಗೆ ಕುಂಭಕರರ್ಣ ನಿದ್ದೆ ಮಾಡಿದ ಇಲಾಖೆಯ ನಿರ್ದೇಶಕರ ವರ್ತನೆಯನ್ನು ಖಂಡಿಸಿ, ಸಚಿವರ ಆದೇಶವಿದ್ದರೂ ಆನ್‌ಲೈನ್ ಸಮಯದಲ್ಲಿ ಹಾರ್ಡ್‌ಕಾಪಿ ನೀಡಿದ ಸಂಘ ಸಂಸ್ಥೆಗಳನ್ನು ಧನಸಾಹಯಕ್ಕೆ ಪರಿಗಣಿಸದೆ ನಿರ್ಲಕ್ಷ ಧೋರಣೆ ತಾಳಿದ ನಿರ್ದೇಶಕರ ಬೇಜವಾಬ್ದಾರಿ ವರ್ತನೆ, ವೃತ್ತಿಪರ ಕಲಾವಿದರಿಗೆ ಇಡೀ ವರ್ಷ ಕಾರ್ಯಕ್ರಮ ಪ್ರಾಯೋಜನೆ ಮಾಡದೇ ತೊಂದರೆ ನೀಡುತ್ತಿದ್ದಾರೆ. ಕಾಟಾಚಾರಕ್ಕೆ ಜನವರಿ ಅಂತ್ಯದಲ್ಲಿ ಅಲ್ಪ ಸ್ವಲ್ಪ ಧನಸಹಾಯ ನೀಡಿ ಧನಸಹಾಯ ಪ್ರಕ್ರಿಯೆಯನ್ನು ಮುಗಿಸಿದ್ದಾರೆ
. ಈ ಭಾಗದ ದಲಿತ ಕಲಾವಿದರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸಹ ಸರಿಯಾದ ರೀತಿಯಲ್ಲಿ ಧನಸಹಾಯ ವಿನಿಯೋಗ ಮಾಡಿರುವುದಿಲ್ಲ. ಹೈ. ಕ. ಪ್ರದೇಶಕ್ಕೆ ೩೭೧(ಜೆ) ಕಲಮಿನ ಅನ್ವಯ ವಿಶೇಷ ಅನುದಾನವನ್ನು ನೀಡದಿರುವುದನ್ನು ಉಗ್ರವಾಗಿ ಖಂಡಿಸಿ ಇಲಾಖೆಯ ನಿರ್ದೇಶಕರ ಹೈ. ಕ. ಪ್ರದೇಶದಲ್ಲಿ ಇಲಾಖೆಯ ಡಿ.ಡಿ. ಮತ್ತು ಜೆಡಿ ಅವರನ್ನು ನಿಯುಕ್ತಿಗೊಳಿಸದಿರುವ ಕ್ರಮವನ್ನು ಖಂಡಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಲಾವಿದರು ಕಲಾವಿದೆಯಾಗಿ ಸಚಿವೆಯಾಗಿರುವ ಉಮಶ್ರೀ ಅವರ ಭಾವಚಿತ್ರಕ್ಕೆ ಎಲೆ ಅಡಿಕೆ ಹಾಕಿಕೊಂಡು ಹೈಕ ಶೈಲಿಯಲ್ಲಿ ಕ್ಯಾಕರಿಸಿ ಉಗಿದು ಧಿಕ್ಕಾರ ಕೂಗುವ ಮೂಲಕ ಪ್ರತಿಭಟಿಸಿದರು.