ಇಟಗಿ ಉತ್ಸವ ಪೂರ್ವಭಾವಿ ಸಭೆ ಯಶಸ್ವಿ
: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಕೊಪ್ಪಳ ಮತ್ತು ಇಟಗಿ ಉತ್ಸವದ ಸಾಂಸ್ಕøತಿಕ ಸಮಿತಿಯಿಂದ 2016ರ ಡಿಸೆಂಬರ್ 25 ರಿಂದ 28ರ ವರೆಗೆ 13ನೇ ಬಾರಿಗೆ ನಡೆಯಲಿರುವ ಇಟಗಿ ಉತ್ಸವದ ಪೂರ್ವಭಾವಿ ಸಭೆಯನ್ನು ಮಹಾದೇವ ದೇವಸ್ಥಾನದ ಆವರಣದಲ್ಲಿ ಜರುಗಿತು.
ಇಟಗಿ ಉತ್ಸವದ ಸಂಘಟಕರಾದ ಮಹೇಶಬಾಬು ಸುರ್ವೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ನಡೆಯಲಿರುವ ಇಟಗಿ ಉತ್ಸವಕ್ಕೆ ಅಂತಾರಾಜ್ಯ ಕಲಾವಿದರನ್ನು ಆಹ್ವಾನಿಸಿ ಕಲಾಪ್ರದರ್ಶನವನ್ನು ನೀಡುವುದರ ಜೊತೆಗೆ ಇಟಗಿ ಪ್ರದೇಸ ವ್ಯಾಪ್ತಿಯ ನಾಲ್ಕೂ ದಿಕ್ಕಿನಲ್ಲೂ ಸ್ವಾಗತ ಕೋರುವ ಕಮಾನುಗಳ ನಿರ್ಮಾಣದ ಅವಶ್ಯಕತೆಯನ್ನು ಸಭೆಯಲ್ಲಿ ಮಂಡಿಸಿದರು. ಇಟಗಿ ಪ್ರವಾಸಿ ತಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಪ್ರಸ್ತಾಪಿಸಿ ಪ್ರವಾಸೋದ್ಯಮ ಇಲಾಖೆಯು ಶೀಘ್ರದಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಕೂಡಲೆ ಸ್ವಾಗತ ಕಮಾನುಗಳನ್ನು ನಿರ್ಮಿಸಲು ಒತ್ತಾಯಿಸಿದರು.
ಸಭೆಯಲ್ಲಿ ಉತ್ಸವ ಕುರಿತು ಜನಪದ ಸಂಘಟಕ ವೈ. ಬಿ. ಜೂಡಿ, ನಾಗರಿಕರ ವೇದಿಕೆಯ ಗೌರವಾಧ್ಯಕ್ಷ ಹನುಮಂತಪ್ಪ ಕುರಿ, ಕನ್ನಡ ಸೇನೆಯ ತಾಲೂಕ ಅಧ್ಯಕ್ಷ ಅಲ್ಲಾಭಕ್ಷಿ ಕಲ್ಲೂರ, ನಿವೃತ್ತ ಗ್ರಂಥಾಲಯ ಅಧಿಕಾರಿ ಎಂ. ಸಿ. ಫಣಿ, ಶಿಕ್ಷಕ ಶ್ರೀನಿವಾಸ ಚಿತ್ರಗಾರ, ಗವಿಸಿದ್ದಪ್ಪ ಬಾರಕೇರ, ಬಸಯ್ಯ ಮಠಪತಿ, ಶಂಕ್ರಪ್ಪ ಕೋರಿ ಸೇರಿದಂತೆ ಇತರರು ಮಾತನಾಡಿ ಉಪಯುಕ್ತ ಸಲಹೆ ನೀಡಿದರು.
ಶರಣಪ್ಪ ಹಾದಿ, ಅಲ್ತಾಫ್ ಪಟೇಲ್, ಮಹೇಶಕುಮಾರ ಹುಜರತ್ತಿ, ಮೌಲಾಹುಸೇನ್ ಎಚ್. ಕೆ, ಚಂದಾಲಿಂಗಪ್ಪ ಬಿ. ಮಾಲಗಿತ್ತಿ, ಎಚ್. ಕೆ. ಸುರ್ವೆ, ಎಂ.ಕೆ. ಕೋರಿ, ಮಲ್ಲಿಕಾರ್ಜುನ ಹುರಳಿ, ತುಳಜಪ್ಪ ನಾಯಕ ಸೇರಿದಂತೆ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಬಿ. ಎಂ. ಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಾಲಯದ ಅರ್ಚಕರಾದ ಶ್ರೀಕಾಂತ ಪೂಜಾರ ಸ್ವಾಗತಿಸಿದರು. ವೈ. ಬಿ. ಜೂಡಿ ವಂದಿಸಿದರು.

No comments:
Post a Comment