Friday, 30 September 2016



ಐತಿಹಾಸಿಕ ಇಟಗಿ ಉತ್ಸವ ಕೇವಲ ಉತ್ಸವವಾಗಿರದೆ ಸಂಸ್ಕøತಿಕ ಚಳುವಳಿಯಾಗಿದೆ
ಜಿಲ್ಲಾ ನಾಗರೀಕ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರ್ವೆ ಅಭಿಮತ
ಕುಕನೂರ :
ಐತಿಹಾಸಿ,ಸುಪ್ರಸಿದ್ಧ ದೇವಾಲಯಗಳ ಚಕ್ರವರ್ತಿ ಇಟಗಿ ಗ್ರಾಮದಲ್ಲಿ ಕಳೆದ 13 ವರ್ಷಗಳಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಇಟಗಿ ಉತ್ಸವ ನೆರವೇರಿಸುತ್ತಾ ಬಂದಿದ್ದು ಇದರ ಯಶಸ್ಸು ಸಾರ್ವಜನಿಕರಿಗೆ ಸೇರುತ್ತದೆ ಎಂದು ಕೊಪ್ಪಳ ಜಿಲ್ಲಾ ನಾಗರೀಕ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರ್ವೆ ನುಡಿದರು.
ಕುಕನೂರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ಕೊಪ್ಪಳ ಜಿಲ್ಲಾ ನಾಗರೀಕ ವೇದಿಕೆಯವರು ಖಾಸಗಿ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಡಿ 26,27,ಮತ್ತು 28 ರಂದು ಮೂರುದಿನಗಳ ಕಾಲ ಜರುಗಲಿರುವ ಇಟಗಿ ಉತ್ಸವದ ದಶಮಾನೋತ್ಸವ ಆಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಇಟಗಿ ಉತ್ಸವ ಕೇವಲ ಉತ್ಸವವಾಗಿರದೆ ಸಂಸ್ಕøತಿಕ ಚಳುವಳಿಯಾಗಿದೆ ಎಂದರು. ಕಲಾವಿದರಿಗೆ ಪ್ರೋತ್ಸಾಹಿಸುವದು ಹಿರಿಯ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಗುರುತರವಾದÀ ಸಮಾಜಮುಖಿ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.
ಕೊಪ್ಪಳದ ಜಿಲ್ಲಾಡಳಿತದ ಮುಂಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಜಿ ಎಚ್ ಪಟೇಲರ ಮೂರ್ತಿ ಪ್ರತಿಷ್ಠಾಪಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವದು ಎಂದರು.
ಇಟಗಿ ಉತ್ಸವ ಜನರ ಉತ್ಸವವಾಗಬೇಕು,ಗ್ರಾಮೀಣ ಭಾಗದ ಕಲೆ ನಗರ ಪ್ರದೇಶಗಳಿಗೂ ವಿಸ್ತರಿಸುವ ಮಹತ್ವದ ಕೆಲಸ ಉತ್ಸವದಲ್ಲಿ ಆಗಬೇಕು ಎನ್ನುವ ಸದುದ್ದೇಶ ಈ ಉತ್ಸವ ಹೊಂದಿದೆ ಎಂದರು.
ಈ ಸಾರಿ ಇಟಗಿ ಉತ್ಸವದ ಸಂದರ್ಭದಲ್ಲಿ ಭಾನಾಪೂರ,ಬನ್ನಿಕೊಪ್ಪ,ಕುಕನೂರ ಮುಂತಾದ ಆಯಾಕಟ್ಟಿನ ಸ್ಥಳಗಳಲ್ಲಿ ಇಟಗಿ ಉತ್ಸವದ ಮಾಹಿತಿ ನೀಡುವ ಕಮಾನುಗಳನ್ನು ನಿಲ್ಲಿಸಲಾಗುವದು ಎಂದರು.
ಸಾಹಿತಿ ಜಿ ಎಸ್ ಗೋನಾಳ ಮಾತನಾಡಿ ಸುಮಾರು 5 ಸಾವಿರ ಹಿರಿ ಕಿರಿಯ ಕಲಾವಿದರಿಗೆ ವೇದಿಕೆ ಕಲ್ಪಿಸಿ 50 ಕ್ಕೂ ಹೆಚ್ಚು ಹಿರಿಯ ಕಲಾವಿದರಿಗೆ ಮಾಶಾಸನ ದೊರಕಿಸಿಕೊಡುವಲ್ಲಿ ರಾಜ್ಯ ಪತ್ರಕರ್ತರ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರ್ವೆ ಪ್ರಮುಖಪಾತ್ರ ವಹಿಸಿದ್ದಾರೆಂದು ಅವರು ಸ್ಥಳೀಯ ಪ್ರತಿಭೆಗಳಿಗೆ ಅವಕಾಸದೊರಕಿಸಿಕೊಡುವದಲ್ಲದೇ ರಾಜ್ಯದ ಪ್ರತಿಭಾವಂತ ಕಲಾವಿದರಿಗೆ ಅವಕಾಸದೊರಕಿಸಿಕೊಡುವದರ ಮೂಲಕ ರಾಜ್ಯಾದ್ಯಂತ ಉದಯೋನ್ಮುಖರ ಕಲೆಯನ್ನು ಪ್ರಚಾರಗೊಳಿಸಿದ ಕೀರ್ತಿ ಮಹೇಶಬಾಬು ಸುರ್ವೆರವರಿಗೆ ಸಲ್ಲುತ್ತದೆ ಎಂದರು.
ಪತ್ರಕರ್ತರ ಘೋಷ್ಠಿ : ಪ್ರಸಕ್ತ ಸಾಲಿನಲ್ಲಿ ನೆರವೇರುವ ಇಟಗಿ ಉತ್ಸವದಲ್ಲಿ ವಿಶೇಷವಾಗಿ ಪತ್ರಕರ್ತರ ಘೋಷ್ಠಿ ನೆರವೇರಿಸುವ ಮೂಲಕ ಪತ್ರಕರ್ತರ ತಲ್ಲಣಗಳನ್ನು ಅನಾವರಗೊಳಿಸುವದು ಮತ್ತು ಅದಕ್ಕೆ ಪರಿಹಾರವನ್ನು ಕಂಡು ಹಿಡಿಯುವ ಮಾರ್ಗ ಸೂಚಿಗಳ ಬಗ್ಗೆ ಗಂಭೀರ ಚಿಂತನೆಗಳು ನಡೆಯಬೇಕಿದೆ ಎಂದರು.
ಹಿರಿಯ ಪತ್ರಕರ್ತ ಅಲ್ಲಾವುದ್ದೀನ ಯಮ್ಮಿ ಮಾತನಾಡಿ ಖಾಸಗಿ ಸಹಭಾಗಿತ್ವದಲ್ಲಿ ಐತಿಹಾಸಿಕ ಇಟಗಿ ಉತ್ಸವ ಆಚರಿಸಬೇಕು. ಆದರೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಇಟಗಿ ಉತ್ಸವದ ಹೊಣೆಗಾರಿಕೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮಹೇಶಬಾಬು ಸುರ್ವೆಕಳೆದ 13 ವರ್ಷಗಳಿಂದಲೂ ಜವಾಬ್ದಾರಿಯಿಂದ ನಿರ್ವಹಿಸುತಿದ್ದಾರೆ.ಸುರ್ವೆ ಅವರ ಜನಪರ ಕಾಳಜಿ ನಿಜಕ್ಕೂ ಶ್ಲಾಘನೀಯವಾಗಿದೆ.
ಗ್ರಾಮೀಣ ಭಾಗದ ಪ್ರತಿಭೆಗಳನ್ನು ನಾಡಿಗೇ ಪರಿಚಯಿಸುವ ಕೆಲಸ ಇತರರಿಗೂ ಮಾದರಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಮಲ್ಲಪ್ಪ ಮಾಟರಂಗಿ,ಪಂಚಯ್ಯ ಹಿರೇಮಠ, ನಾಗರಾಜ ಬೆಣಕಲ್, ಮಂಜುನಾಥ ಅಂಗಡಿ,ಬಸವರಾಜ ಕೊನಾರಿ ಮುಂತಾದವರು ಉಪಸ್ಥಿತರಿದ್ದರು.

No comments:

Post a Comment