Wednesday, 3 February 2016

ಸಚಿವೆ ಉಮಾಶ್ರೀ ಭಾವಚಿತ್ರಕ್ಕೆ ಕ್ಯಾಕರಿಸಿ ಉಗಿಯುವ ಮೂಲಕ ಪ್ರತಿಭಟನೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾರ್ಗಸೂಚಿಯನ್ವಯ ಹೈದರಾಬಾದ ಕರ್ನಾಟಕ ಪ್ರದೇಶಕ್ಕೆ ಅನ್ಯಾಯ ಮಾಡುತ್ತಿದ್ದು, ಸಚಿವೆ ಉಮಾಶ್ರೀ ಅವರ ನಿರ್ಲಕ್ಷ ಹಾಗೂ ಇಲಾಖೆಯ ನಿರ್ದೇಶಕರ ಸರ್ವಾಧಿಕಾರಿ ಧೋರಣೆ, ಖಂಡಿಸಿ ಇಂದು ಕೊಪ್ಪಳದ ಅಶೋಕ ವೃತ್ತದಲ್ಲಿ ಬೆ. ೧೧ ಗಂಟೆಗೆ ಹೈದರಾಬಾದ ಕರ್ನಾಟಕ ಸಾಹಿತಿ, ಕಲಾವಿದರ ಕನ್ನಡಪರ ಸಂಘಟನೆಗಳ ಸಾಂಸ್ಕೃತಿಕ ಒಕ್ಕೂಟದ ಅಡಿಯಲ್ಲಿ ಸಾಂಸ್ಕೃತಿಕ ಪ್ರತಿಭಟನೆಯನ್ನು ವಿನೂತನ ಶೈಲಿಯಲ್ಲಿ ಹಮ್ಮಿಳ್ಳಲಾಯಿತು.
ಈ ಪ್ರತಿಭಟನೆಯಲ್ಲಿ ಸಚಿವೆ ಉಮಾಶ್ರೀ ಅವರ ನಿರ್ಲಕ್ಷ ಧೋರಣೆಯನ್ನು ಖಂಡಿಸಿ ಅವರ ಭಾವಚಿತ್ರಕ್ಕೆ ಕ್ಯಾಕರಿಸಿ ಉಗಿಯುವ ಮೂಲಕ ವಿಶೇಷವಾಗಿ ಪ್ರತಿಭಟನೆ ಮಾಡಲಾಯಿತು.
ಹೈದರಾಬಾದ ಕರ್ನಾಟಕ ಪ್ರದೇಶದ ಕಲಾವಿದರ ನಿರ್ಲಕ್ಷ, ಸಂಘ ಸಂಸ್ಥೆಗಳಿಗೆ ಅನುದಾನ ನೀಡುವಲ್ಲಿ ಅನುಸರಿಸುತ್ತಿರುವ ತಾರತಮ್ಯ ನೀತಿ, ಲಭ್ಯ ಅನುದಾನದಲ್ಲಿ ಪ್ರಾಧೇಶಿಕ ಆದ್ಯತೆಯ ನಿರ್ಲಕ್ಷ, ಆನ್‌ಲೈನ್‌ನಲ್ಲಿ ಸಂಘ ಸಂಸ್ಥೆಗಳಿಗೆ ಧನಸಹಾಯ ನೀಡುವಲ್ಲಿ ಕಠಣ ನಿಯಮಗಳನ್ನು ಕಡ್ಡಾಯಗೊಳಿಸಿ ತಮಗೆ ಬೇಕಾದ ಬೆಂಗಳೂರಿನ ಸಂಸ್ಥೆಗಳಿಗೆ ನಿಯಮಗಳನ್ನು ಸಡಿಲಿಸಿ ಭರಪೂರ ಧನಸಹಾಯವನ್ನು ಅವರಿಗೆ ನೀಡಿ ಹೈದರಾಬಾದ ಕರ್ನಾಟಕ ಪ್ರದೇಶದ ಸಂಘ ಸಂಸ್ಥೆಗಳಿಗೆ ಅನ್ಯಾಯ ಮಾಡಿದ್ದಾರೆ. ಆಗಸ್ಟ್ ೨೦೧೫ರಲ್ಲಿ ಆನ್‌ಲೈನ್‌ಲ್ಲಿ ಅರ್ಜಿ ಕರೆದು ಇಲ್ಲಿಯ ವರೆಗೆ ಕುಂಭಕರರ್ಣ ನಿದ್ದೆ ಮಾಡಿದ ಇಲಾಖೆಯ ನಿರ್ದೇಶಕರ ವರ್ತನೆಯನ್ನು ಖಂಡಿಸಿ, ಸಚಿವರ ಆದೇಶವಿದ್ದರೂ ಆನ್‌ಲೈನ್ ಸಮಯದಲ್ಲಿ ಹಾರ್ಡ್‌ಕಾಪಿ ನೀಡಿದ ಸಂಘ ಸಂಸ್ಥೆಗಳನ್ನು ಧನಸಾಹಯಕ್ಕೆ ಪರಿಗಣಿಸದೆ ನಿರ್ಲಕ್ಷ ಧೋರಣೆ ತಾಳಿದ ನಿರ್ದೇಶಕರ ಬೇಜವಾಬ್ದಾರಿ ವರ್ತನೆ, ವೃತ್ತಿಪರ ಕಲಾವಿದರಿಗೆ ಇಡೀ ವರ್ಷ ಕಾರ್ಯಕ್ರಮ ಪ್ರಾಯೋಜನೆ ಮಾಡದೇ ತೊಂದರೆ ನೀಡುತ್ತಿದ್ದಾರೆ. ಕಾಟಾಚಾರಕ್ಕೆ ಜನವರಿ ಅಂತ್ಯದಲ್ಲಿ ಅಲ್ಪ ಸ್ವಲ್ಪ ಧನಸಹಾಯ ನೀಡಿ ಧನಸಹಾಯ ಪ್ರಕ್ರಿಯೆಯನ್ನು ಮುಗಿಸಿದ್ದಾರೆ
. ಈ ಭಾಗದ ದಲಿತ ಕಲಾವಿದರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸಹ ಸರಿಯಾದ ರೀತಿಯಲ್ಲಿ ಧನಸಹಾಯ ವಿನಿಯೋಗ ಮಾಡಿರುವುದಿಲ್ಲ. ಹೈ. ಕ. ಪ್ರದೇಶಕ್ಕೆ ೩೭೧(ಜೆ) ಕಲಮಿನ ಅನ್ವಯ ವಿಶೇಷ ಅನುದಾನವನ್ನು ನೀಡದಿರುವುದನ್ನು ಉಗ್ರವಾಗಿ ಖಂಡಿಸಿ ಇಲಾಖೆಯ ನಿರ್ದೇಶಕರ ಹೈ. ಕ. ಪ್ರದೇಶದಲ್ಲಿ ಇಲಾಖೆಯ ಡಿ.ಡಿ. ಮತ್ತು ಜೆಡಿ ಅವರನ್ನು ನಿಯುಕ್ತಿಗೊಳಿಸದಿರುವ ಕ್ರಮವನ್ನು ಖಂಡಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಲಾವಿದರು ಕಲಾವಿದೆಯಾಗಿ ಸಚಿವೆಯಾಗಿರುವ ಉಮಶ್ರೀ ಅವರ ಭಾವಚಿತ್ರಕ್ಕೆ ಎಲೆ ಅಡಿಕೆ ಹಾಕಿಕೊಂಡು ಹೈಕ ಶೈಲಿಯಲ್ಲಿ ಕ್ಯಾಕರಿಸಿ ಉಗಿದು ಧಿಕ್ಕಾರ ಕೂಗುವ ಮೂಲಕ ಪ್ರತಿಭಟಿಸಿದರು.