Saturday, 29 June 2019

ಪತ್ರಕರ್ತರ ವೇದಿಕೆ ಬೆಂಗಳೂರು & ಕನಾ೯ಟಕ ಮಿಡಿಯಾ ಸೆಂಟರ್ .ಬೆಂಗಳೂರು # ಪತ್ರಿಕಾ ದಿನಾಚರಣೆ ಮತ್ತು ಹಿರಿಯ ಪತ್ರಕತ೯ರಿಗೆ ಹುಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿಯನ್ನು ದಿನಾಂಕ ೧-೭-೨೦೧೯ ರ೦ದು ಬೆಳಿಗ್ಗೆ ೧೧ ಗ೦ಟೆಗೆ ಬೆಂಗಳೂರಿನ ನಯನ ರ೦ಗ ಮ೦ದಿರ ದಲ್ಲಿ.....

 #ನಿಮಗಿದು ಪ್ರೀತಿಯ ಅಭಿಮಾನದ ಆಮ೦ತ್ರಣ

ಬನ್ನಿ ......

 ಮಹೇಶಬಾಬು,

 9845338160/9113565189


Sunday, 2 June 2019

16 ನೇ ಬಾರಿಗೆ 2019 ಡಿಸೆಂಬರ 21 ರಿಂದ 25 ರವರೆಗೆ 5 ದಿನಗಳ ಕಾಲ ಇಟಗಿ ಉತ್ಸವ
 ದೇವಾಲಯಗಳ ಚಕ್ರವರ್ತಿ ಬಿರುದಾಂಕಿತ ಮಹಾದೇವ ದೇವಸ್ಥಾನದ ಆವರಣದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯಿಂದ ಖಾಸಗಿಯಾಗಿ 16ನೇ ಬಾರಿಗೆ ಇಟಗಿ ಉತ್ಸವವನ್ನು ಆಚರಿಸಲು ನಾಗರಿಕರ ವೇದಿಕೆ ನಿರ್ಣಯಿಸಿದ್ದು ಜನೇವರಿ 8ರಂದು ನಡೆದ ನಾಗರಿಕರ ವೇದಿಕೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಮಹೇಶಬಾಬು ಸುರ್ವೆ ಅವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಪಧಾಧಿಕಾರಿಗಳು ಭಾಗವಹಿಸಿ ವರ್ಷದ ಆಚರಿಸಿದ ಇಟಗಿ ಉತ್ಸವದ ಯಶಸ್ವಿ  ಕುರಿತು ಚರ್ಚಿಸಲಾಯಿತು.
          ನಾಗರಿಕರ ವೇದಿಕೆ 2005 ರಿಂದಲೂ 2019 ಜನೇವರಿಗೂ 15 ಬಾರಿ ಉತ್ಸವವನ್ನು ಆಚರಿಸಿದ್ದು 15 ವರ್ಷದ ಅವಧಿಯಲ್ಲಿ ಸುಮಾರು 1000 ಕ್ಕೂ ಕವಿಗಳು ಇಟಗಿ ಉತ್ಸವದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ. ಸುಮಾರು 1500 ಕಲಾತಂಡಗಳು ಕಲಾತಂಡಗಳು ಕಲಾ ಪ್ರದರ್ಶನ ನೀಡಿವೆ. ಸುಮಾರು 2000ಕ್ಕೂ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯಮಟ್ಟದ ಚಾಲುಕ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 10 ನೇ ಇಟಗಿ ಜನಪದ ಜಾತ್ರೆಯ ಮೂಲಕ ಜಿಲ್ಲೆಯ 300ಕ್ಕೂ ಹೆಚ್ಚು ಜನಪದ ಕಲಾತಂಡಗಳಿಗೆ ಅವಕಾಶ ನೀಡಿ ಅವರ ಪ್ರದರ್ಶನವನ್ನು ಪ್ರೋತ್ಸಾಹಿಸಲಾಯಿತು. 7 ಜನ ಯಲಬುರ್ಗಾ ತಾಲೂಕಿನ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಕವಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆಇಟಗಿ ಸುತ್ತಮುತ್ತಲಿನ ಸುಮಾರು 1200 ಶಾಲಾ ಮಕ್ಕಳಿಗೆ ವೇದಿಕೆಯಲ್ಲಿ ಸಾಂಸ್ಕøತಿಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಮಕ್ಕಳ ಪ್ರತಿಭಾ ವಿಕಾಸಕ್ಕೆ ಪ್ರೋತ್ಸಾಹ ನೀಡಲಾಗಿದೆಇಟಗಿಯ 20ಕ್ಕೂ ಹಿರಿಯ ಕಲಾವಿದರಿಗೆ ಮತ್ತು ಕೊಪ್ಪಳ ಜಿಲ್ಲೆಯ ಜಿಲ್ಲೆಯ 30ಕ್ಕೂ ಹೆಚ್ಚು ಹಿರಿಯ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮಾಶಾಸನ ದೊರೆಯುವಂತೆ ಮಾಡುವಲ್ಲಿ ಇಟಗಿ ಉತ್ಸವ ಪಾತ್ರ ಮಹತ್ವವಾದದು.
          ಇಟಗಿ ಉತ್ಸವದ ಆಚರಣೆಯಿಂದಾಗಿ ಇಟಗಿಗೆ ಪ್ರವಾಸೋದ್ಯಮ ಇಲಾಖೆಗಳ ಅಂಕಿ-ಅಂಶಗಳ ಪ್ರಕಾರ 46000 ದೇಸಿಯ ಪ್ರವಾಸಿಗರನ್ನ, 432 ವಿದೇಶಿ ಪ್ರವಾಸಿಗರನ್ನ ಇಟಗಿಯತ್ತ ಸೆಳೆಯಲು ಸಹಕಾರಿಯಾಗಿದ್ದು, ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಇಟಗಿ ದೇವಸ್ಥಾನದ ಕುರಿತು ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಉತ್ಸವದಿಂದಾಗಿ ಚರ್ಚಿತವಾಗಿದೆ. ಸರ್ಕಾರದ ಮಟ್ಟದಲ್ಲಿ ಕೊಪ್ಪಳ ಜಿಲ್ಲೆ ಎಂದರೆ ಇಟಗಿಯ ದೇವಸ್ಥಾನದ ದೇವಾಲಯವು ಕೊಪ್ಪಳದ ಐಕಾನ ಆಗಿ ಗುರುತಿಸುವಂತಾಗಿದೆ.
ಇದು ನಮ್ಮ ಸಂಸ್ಥೆ ಆಚರಿಸುವ ಇಟಗಿ ಉತ್ಸವಕ್ಕೆ ಸಂದ ಗೌರವ. ಎಲ್ಲಾ ವಿಶೇಷಣಗಳೊಂದಿಗೆ ಪ್ರತಿ ವರ್ಷ ನಾಗರಿಕರ ವೇದಿಕೆಯು ಅತ್ಯಂತ ಪ್ರಾಮಾಣಿಕವಾಗಿ ಜವಾಬ್ದಾರಿಯುತವಾಗಿ, ನಿಸ್ಪಕ್ಷವಾಗಿ, ಸೌವಾರ್ಧತಿತವಾಗಿ, ಸಾಂಸ್ಕøತಿಕವಾಗಿ, ಐತಿಹಾಸಿಕ ಪರಂಪರೆಯನ್ನು ಉಳಿಸಿ ಬೆಳಸಿದೆ. ಎಲ್ಲ ಹೆಗ್ಗಳಿಕೆಯೊಂದಿಗೆ ಸಂಸ್ಥೆಯು ಮುಂಬರುವ 2019 ಡಿಸೆಂಬರನಲ್ಲಿ 21 ರಿಂದ 25 ವರೆಗೆ 16 ನೇ ಬಾರಿಗೆ ಉತ್ಸವನ್ನು ಮಾಡಲು ನಿರ್ಧರಿಸಿದೆ.
          20-12-2019 ಶುಕ್ರವಾರದಂದು ದೇವಸ್ಥಾನದ ಆವರಣದಲ್ಲಿ ಹೋಮವನ್ನು ಏರ್ಪಡಿಸಲಾಗಿದೆ.
          21-12-2019 ಶನಿವಾರ 16ನೇ ಬಾರಿಗೆ ಇಟಗಿ ಉತ್ಸವದ ಉದ್ಘಾಟನೆಯಾಗಲಿದ್ದು, ಅಂದು ರಾಜ್ಯದ ಪ್ರಖ್ಯಾತ ಕಲಾತಂಡಗಳು ಭಾಗವಹಿಸಿ ಕಲಾಪ್ರದರ್ಶನವನ್ನು ನೀಡಲಿವೆ.
          22-12-2019ರಂದು ರವಿವಾರ ಇಟಗಿ ಹಾಗೂ ಇಟಗಿ ಸುತ್ತಮುತ್ತಲಿನ ಶಾಲಾ ಮಕ್ಕಳಿಂದ ಇಟಗಿ  ಮಕ್ಕಳ ಉತ್ಸವ ನೆಡೆಯಲಿದ್ದು, ಸುಮಾರು 200 ಕ್ಕೂ ಶಾಲಾ ಬಾಲ ಕಲಾವಿದರು ಭಾಗವಹಸಿ ಕಲಾ ಪ್ರದರ್ಶನ ನೀಡಲಿದ್ದಾರೆ. ಅಲ್ಲದೆ 8ನೇ ಕವಿಸಮ್ಮೇಳನವನ್ನು ತಾಲೂಕಿನ ಹಿರಿಯ ಸಾಹಿತಿಗಳ ನೇತೃತ್ವದಲ್ಲಿ ನೆಡಸಲಿದೆ.
          23-12-2019ರಂದು ಸೋಮವಾರ ರೈತರ ದಿನಾಚರಣೆಯಾಗಿದ್ದು, ರೈತರ ಉತ್ಸವವಾಗಿ ಆಚರಿಸುವ ಮೂಲಕ ರೈತರ ಕುರಿತು ಚಿಂತನ ಗೋಷ್ಠಿ ಜೊತೆಗೆ ರೈತರ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನ ಏರ್ಪಡಿಸಿ ಪ್ರಗತಿಪರ ರೈತರಿಗೆ ಚಾಲುಕ್ಯ ವಿಕ್ರಮಾಧಿತ್ಯ ಪ್ರಶಸ್ತಿಯನ್ನು  ನೀಡಿ ಗೌರವಿಸಲಾಗಿದೆ.  
24-12-2019 ರಂದು ಗೋವಾ, ಆಂಧ್ರಪ್ರದೇಶ, ಪಾಂಡಿಚೇರಿ, ತೆಲಾಂಗಣ, ತಮಿಳನಾಡು ಮತ್ತು ಕೇರಳ ರಾಜ್ಯದಿಂದ ಕಲಾವಿದರನ್ನು ಅಹ್ವಾನಿಸಿ 11 ನೇ ಇಟಗಿ ಜಾನಪದ ಜಾತ್ರೆಯನ್ನು ರಾಜ್ಯದ ಕಲಾವಿದರೊಂದಿಗೆ ಸಮಾಗಮ ಗೊಳಿಸಿ  ಜಾನಪದ ಸಾಂಸ್ಕøತಿಕ ವೈಭವನ್ನು ಬಿಂಬಿಸುವುದು.
          25-12-2019 ರಂದು ಇಟಗಿ ಉತ್ಸವದ ಸಮಾರೋಪ ಸಮಾರಂಭವನ್ನು ಹಮ್ಮಿಕೊಂಡು ಉತ್ಸವಕ್ಕೆ ಸಹಕಾರ ನೀಡಿದ ಎಲ್ಲಾ ಗೌರವಾನ್ವಿತರಿಗೆ ಗೌರವ ಸಮರ್ಪಿಸಿ ಇಟಗಿ ಉತ್ಸವವನ್ನು ಸಮಾರೋಪಗೊಳಿಸಲಾಗುವುದು.
          26-12-2019 ಇಟಗಿ ಮಹೇಶ್ವರನ ಜಾತ್ರೆ ಹಾಗೂ ಇಟಗಿಯ ಸ್ಥಳಿಯ ಕಲಾಭಿಮಾನಿಗಳಿಂದ ನಾಟಕ ಪ್ರದರ್ಶನಕ್ಕೆ ಅನವು ಮಾಡಿಕೊಟ್ಟು ಬೆಂಬಲಿಸುವುದು.
          ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉಪಾಧ್ಯಕ್ಷ ಸಿದ್ಧಪ್ಪ ಹಂಚಿನಾಳ, ಜಿಲ್ಲಾಧ್ಯಕ್ಷ ಎಂ.ಸಾಧಿಕ ಅಲೀ, ಸಾಂಸ್ಕøತಿಕ ಕಾರ್ಯದರ್ಶಿ ವೈ.ಬಿ.ಜೂಡಿ, ಪ್ರಧಾನ ಕಾರ್ಯದರ್ಶಿ ಖಲೀಲ ಹುಡೇದ, ಕಾರ್ಯಕಾರಿ ಸಮಿತಿ ಸದಸ್ಯರಾದ ಉಮೇಶ ಪೂಜಾರ, ಮಂಜುನಾಥ ಅಂಗಡಿ, ಖಾನಸಾಬ ಇತರರು ಭಾಗವಹಿಸಿದ್ದರು.
          ಇಟಗಿ ಉತ್ಸವ ಕುರಿತು ಸಲಹೆ ಸೂಚನೆಗಳನ್ನು ಶ್ರೀ ಮಹೇಶಬಾಬು ಸುರ್ವೆ ಅಧ್ಯಕ್ಷರು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ  ಮೊ.9845338160, 9113565189 ಗಾಗಲೀ -ಮೇಲ್ಗೆ suಡಿve66@gmಚಿi.ಛಿom   ನೀಡಲು ಕೋರಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹೇಶಬಾಬು ಸುರ್ವೆ
ಅಧ್ಯಕ್ಷರು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ